Kannada Actor Kiccha Sudeep has taken his twitter account to express his happiness of Climbing a tree. Actor Sudeep is in London for the movie The Villain shooting. Meanwhile, he tweeted that he finally got Chance after decades and they were about to get a tree.
ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ ಅಭಿನಯದ 'ದಿ ವಿಲನ್' ಸಿನಿಮಾದ ಶೂಟಿಂಗ್ ಆರಂಭವಾದಾಗಿನಿಂದಲೂ ಒಂದಲ್ಲಾ ಒಂದು ವಿಷಯಕ್ಕೆ ಸಖತ್ ಸದ್ದು ಮಾಡುತ್ತಿದೆ.ಸದ್ಯ 'ದಿ ವಿಲನ್' ಚಿತ್ರೀಕರಣದ ಹಿನ್ನೆಲೆ ಸುದೀಪ್ ಲಂಡನ್ ನಲ್ಲಿದ್ದಾರೆ. ಈ ನಡುವೆಯೇ ಅವರು ತಮಗೆ ಸುಮಾರು ದಶಕಗಳ ನಂತರ ಕೊನೆಗೂ ಚಾನ್ಸ್ ಸಿಕ್ಕಿದೆ ಎಂದು ಟ್ವೀಟ್ ಮಾಡಿರುವುದು ತಾವು ಒಂದು ಮರ ಹತ್ತಿರುವ ಬಗ್ಗೆ. ಈ ಬಗ್ಗೆ ತಮ್ಮ ಖುಷಿಯನ್ನು ಹಂಚಿಕೊಂಡಿರುವ ಸುದೀಪ್ ಮರ ಹತ್ತುವುದು ಬಹುದೊಡ್ಡ ಕಠಿಣ ಕೆಲಸವೇನು ಅಲ್ಲ ಎಂದು ಟ್ವೀಟಿಸಿದ್ದಾರೆ.